ಜಪಾನಿಯರ ಯಶಸ್ಸಿನ ರಹಸ್ಯ..

ಜಪಾನಿಯರ ಯಶಸ್ಸಿಗೆ ಬರೀ ಅವರ ಸಮಯ ಪ್ರಜ್ಞೆ ಮತ್ತು ಅವರ ಪರಿಶ್ರಮ ಮಾತ್ರ ಕಾರಣವಲ್ಲ. ಇವುಗಳನ್ನು ಹೊರತುಪಡಿಸಿ ಅವರಲ್ಲಿನ ಬಹು ಮುಖ್ಯವಾದ ಒಂದು ಹವ್ಯಾಸ ನಾವು ತಿಳಿಯಬೇಕಾಗಿದೆ. ಅದುವೇ “ಕೈಜೆನ್” ಅಂದರೆ ‘ನಿರಂತರ ಬೆಳವಣಿಗೆ’.


ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಅದು ಒಂದು ಅಥವಾ ಹಲವು ದಿನಗಳ ಪ್ರಯತ್ನದಿಂದ ದೊರೆಯುವುದಿಲ್ಲ. ಅದಕ್ಕಾಗಿ ನಿರಂತರ ಶ್ರಮ ಮತ್ತು ಬೆಳವಣಿಗೆ ಬೇಕಾಗಿರುತ್ತೆ. ಯಾವುದೇ ವಿಷಯದಲ್ಲಿ ನಾವು ಮೇಲುಗೈ ಸಾಧಿಸಬೇಕಾದರೆ ಆ ವಿಷಯದ ಬಗ್ಗೆ ನಿರಂತರವಾಗಿ ಸ್ವಲ್ಪ ಮಟ್ಟಿನ ಬೆಳವಣಿಗೆಯ ಮಾರ್ಗ ನಾವು ಹುಡುಕಿಕೊಳ್ಳಬೇಕು. ‘ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ’ ಎಂಬ ಗಾದೆಯಂತೆ ಪ್ರತಿ ದಿನ ನಾವು ನಮ್ಮ ಬೆಳವಣಿಗೆಗಾಗಿ ಮೀಸಲಿಡುವ ಸಮಯ ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಎಂಬುದು ಅವರ ನಂಬಿಕೆ ಆಗಿದೆ. ಹಾಗೆಯೇ ಸ್ವಂತ ಸಾಧನೆಯ ದಾರಿಯಲ್ಲಿ ಯಾವ ಕೆಲಸವನ್ನು ಕೇವಲವೆಂದು ಭಾವಿಸದೇ, ಸಣ್ಣದಾದರೂ ನಿಷ್ಠೆಯಿಂದ ಮಾಡಬೇಕು.


ಇಂತ ಹವ್ಯಾಸ, ಯಾವುದೆೆ ಒಂದು ಯಶಸ್ಸಿಗೆ ಮಾತ್ರ ಸೀಮಿತವಲ್ಲ. ಇದು ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆÉ. ಇದರಂತೆ ನಾವು ನಮ್ಮ ದಿನದಲ್ಲಿ ಸ್ವಲ್ಪ ಸಮಯವನ್ನು ನಮ್ಮ ಬೆಳವಣಿಗೆಗಾಗಿ ಮೀಸಲಿಟ್ಟರೆ ನಮ್ಮ ಯಶಸ್ಸು ಕಟ್ಟಿದ ಬುತ್ತಿ.

Back To Top