ಮಾದಕ ವಸ್ತುಗಳ ದುರ್ಬಳಕೆಯ ತಡೆ, ಉತ್ತಮ ಸಮಾಜ ನಿರ್ಮಾಣದೆಡೆಗೆ ನಡೆ.

ರಾಜ್ಯ ಸರ್ಕಾರವು ಜೂನ್ 26 , 2024 ರಂದು ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿದಿನವನ್ನು ಆಚರಣೆ ಮಾಡಿ ” ಸಾಕ್ಷ್ಯ ಸ್ಪಷ್ಟವಾಗಿದೆ, ತಡೆಗಟ್ಟುವಲ್ಲಿ ಹೂಡಿಕೆ ಮಾಡಿ” (the evidence is clear, invest in preventions) ಎಂಬ ಘೋಷವಾಕ್ಯದ ಮೂಲಕ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಯುವಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದು ನಾಡಿಗೆ ಕರೆ ನೀಡಿದೆ.

ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು

1.ಮನಸ್ಸಿನ ಸ್ಥಿಮಿತವನ್ನು ಕೆಡಿಸುತ್ತದೆ.
2.ವಿಧ್ಯಾರ್ಥಿಯಾಗಿ ಬಳಸಿದವರು ಶಾಲೆಯಲ್ಲಿ ಮಂಕಾಗಿರುತ್ತಾರೆ.
3.ಬಳಕೆದಾರರು ಇತರರಿಗೆ ಹಿಂಸೆ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ.
4.ಹೆಚ್ಚು ಖರೀದಿಯಿಂದ ಹಣ ವ್ಯರ್ಥ ಮಾಡಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ.
5.ಹಂತ ಹಂತವಾಗಿ ಚಟಕ್ಕೆ ಬಿದ್ದು ವ್ಯಾಸನಿಯಾಗುತ್ತಾರೆ
6.ಬಳಸಿದಾಗ ಸಿಕ್ಕಿಹಾಕಿಕೊಂಡರೆ ಜೈಲು ಪಾರು.
7.ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
8.ಅಪರಾಧವನ್ನು ಹೆಚ್ಚುವಂತೆ ಮಾಡುತ್ತದೆ.
9.ಚಟಕ್ಕೆ ಬಿದ್ದ ವ್ಯಸನಿಯ ಪ್ರಾಣವನ್ನು ತೆಗೆಯುತ್ತದೆ.

ಮಾದಕವಸ್ತುವಿನಿಂದ ಯುವ ಜನರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುತ್ತದೆ, ಆದ್ದರಿಂದ ಅವರನ್ನು ರಕ್ಷಿಸಲು ಈ ಕೆಳಗಿನಗಳನ್ನು ಅನುಸರಿಸೋಣ,

  • 1.ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ2.ಶಾಲಾ – ಕಾಲೇಜುಗಳಲ್ಲಿ ಮಕ್ಕಳ ನಡವಳಿಕೆಯ ಬಗ್ಗೆ ಹಾಗೂ ಅವರ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಿ.
  • 3.ಪಲಾಯನವಾದ, ಕೀಳರಿಮೆ, ಸಹವರ್ತಿಗಳ ಒತ್ತಡ, ಮಾನಸಿಕ ಒತ್ತಡ, ಪರೀಕ್ಷೆಗಳ ಒತ್ತಡ, ಕೆಲಸದ ಮತ್ತು ವ್ಯವಹಾರಗಳ ಒತ್ತಡ, ಮಿತಿಮೀರಿದ ಸ್ಪರ್ಧಾತ್ಮಕ ಮನೋಭಾವ ಮೊದಲಾದವುಗಳಿಂದ ಹೊರಬರಲು ಮಾರ್ಗಗಳನ್ನು ತಿಳಿಯಿರಿ.
  • 4.ಕೆಲವು ಔಷಧಗಳ ಸೇವನೆ ಅವಲಂಬನೆಯನ್ನು ಉಂಟುಮಾಡುತ್ತದೆ. ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಕೆ ಮಾಡಬೇಡಿ.
  • 5.ಪೋಷಕರು ಮಕ್ಕಳನ್ನು ನಿಯಮಿತವಾಗಿ ಗಮನಿಸಿ. ಅನಾವಶ್ಯಕವಾಗಿ ಔಷಧ ಸೇವಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಔಷಧ ಮಾರಾಟಗಾರರೇ ಎಚ್ಚರ, ಮಾದಕವಸ್ತು ಬಳಕೆ ನಿಯಂತ್ರಿಸುವಲ್ಲಿ ನಿಮ್ಮ ಜವಾಬ್ಧಾರಿ ಈ ಕೆಳಕಂಡಂತಿದೆ.

1.ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಔಷಧಗಳ ವಿತರಣೆ ಮಾಡಬೇಡಿ.
2.ಅನುಸೂಚಿ (schedule) ಔಷಧಗಳನ್ನು ಮಾರಾಟ ಮಾಡುವ ಮುನ್ನ ವೈದ್ಯರ, ರೋಗಿಯ ಹೆಸರು ಮತ್ತು ವಿಳಾಸ, ಮಾರಾಟ ಮಾಡಿದ ಔಷಧಿಯ ಬ್ಯಾಚ್ ಸಂಖ್ಯೆ, ಔಷಧಿಯ ಪ್ರಮಾಣ ಮೊದಲಾದ ಮಾಹಿತಿಯನ್ನು ಕಡ್ಡಾಯವಾಗಿ ರಶೀದಿಯಲ್ಲಿ ದಾಖಲಿಸುವುದು.
3.ನಿಯಮಗಳನ್ನು ಉಲ್ಲಂಘಿಸಿ ಔಷದಿಗಳನ್ನು ಮಾರಾಟ ಮಾಡಿದಲ್ಲಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ನಿಮ್ಮ ಸ್ವಾಸ್ಥ್ಯ ದೇಶಕ್ಕೆ ಶಕ್ತಿ , ಮಾದಕ ವ್ಯಸನಿಗಳಾಗುವ ಮುನ್ನ ಬಳಸಿ ನಿಮ್ಮ ಯುಕ್ತಿ.

Leave a Reply

Your email address will not be published. Required fields are marked *

Back To Top