ಲಿಗ್ಡಾಸ್ ಗರ್ವಾಲೆ
ಲಿಗ್ಡಾಸ್ ಗರ್ವಾಲೆ ಎಂಬ ಹೊಸ ಜೇಡ ಪ್ರಬೇಧ ಕರ್ನಾಟಕದಲ್ಲಿ ಪತ್ತೆ:-
ಬಲೆ ಎಣೆಯುವುದರಲ್ಲಿ ನಿಪುಣನಾದ ಜೇಡಣ್ಣನ ಹೊಸ ತಳಿ ಕರ್ನಾಟಕದಲ್ಲಿ ಪತ್ತೆಯಾಗಿದೆ. ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಹಂತ ಹಂತವಾಗಿ ಮೀನು, ಪ್ರಾಣಿ ಮತ್ತು ಇನ್ನಿತರ ಜೀವಂತ ಭಕ್ಷ್ಯಗಳನ್ನು ಬೇಟೆಯಾಡಲು ಪ್ರಯೋಗ ಮಾಡಿ ಬಲೆ ಎಣೆದು ಅದರೊಳಗೆ ಬಂಧಿಸುವಲ್ಲಿ ನಿಪುಣನಾದ.
ಆದರೆ ಸೃಷ್ಠಿ ಕ್ರಿಯೆಯನ್ನು ಅರಿಯಲು ಹೋದಾಗ, ಮನುಷ್ಯನಿಗಿಂತ ಒಂದು ಹೆಜ್ಜೆ ಜೇಡವೆಂಬ ಕೀಟವು ತನ್ನ ಸ್ಪಿನ್ನರೆಟ್‍ಗಳಿಂದ ಹೊರತೆಗೆದ ಪ್ರೋಟಾನೇಷಿಯಸ್ ಸ್ಪೈಡರ್ ರೇಷ್ಮೆಯಿಂದ ಬಲೆಯನ್ನು ರಚಿಸಿ ತನ್ನ ಭಕ್ಷ್ಯಕ್ಕೆ ಬೇಕಾದ ಕೀಟಗಳನ್ನು ಬೇಟೆಯಾಡುತ್ತದೆ. ಇಂತಹ ವಿಶಿಷ್ಟ ರೀತಿಯ ಗುಣವನ್ನು ಹೊಂದಿರುವ ಜೇಡ ಪ್ರಬೇಧದ ಪಟ್ಟಿಗೆ ಕಳೆದ ವರ್ಷ ನಂದಿಬೆಟ್ಟದಲ್ಲಿ ಗುರುತಿಸಲಾದ ಅರ್ಕಾವತಿ ಎಂಬ ಜೇಡದ ಪ್ರಭೇದವು ಸೇರ್ಪಡೆಯಾಗಿತ್ತು. ಅಂತೆಯೇ ಈ ವರ್ಷ ಕರ್ನಾಟಕದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಗರ್ವಾಲೆ ಎಂಬ ಹಳ್ಳಿಯಲ್ಲಿ ನಿಸರ್ಗತಜ್ಞರ ತಂಡ ಹೊಸ ಪ್ರಬೇಧ ಜೇಡವನ್ನು ದಾಖಲಿಸಿದೆ. ಲಿಗ್ಡಾಸ್ ಕುಲಕ್ಕೆ ದಾಖಲಾದ ಎರಡನೇ ಪ್ರಬೇಧ ಇದಾಗಿದ್ದು, ಪತ್ತೆಯಾದ ಸ್ಥಳದ ಹೆಸರನ್ನು ಇದಕ್ಕೆ ಸೇರಿಸಿ ಲಿಗ್ಡಾಸ್ ಗರ್ವಾಲೆ ಎಂದು ಹೆಸರಿಡಲಾಗಿದೆ.
1895 ರಲ್ಲಿ “ಲಿಗ್ಡಾಸ್ ಚೆಲಿಫರ್” ಮಯನ್ಮಾರ್‍ನಲ್ಲಿ ಪತ್ತೆಯಾದ ಈ ಕುಲದ ಮೊದಲ ಪ್ರಬೇಧವಾಗಿದೆ, ಎರಡು ಪದರದ ವೆಬ್‍ನ್ನು ನಿರ್ಮಿಸುವ ಲಿಗ್ಡಾಸ್ ಗರ್ವಾಲೆಯು ಹೊಸ ಜಾತಿಯ ಜಂಪಿಂಗ್ (ಜಿಗಿಯುವ) ಜೇಡವಾಗಿದ್ದು, ತಮ್ಮ ಬೇಟೆಯ ಮೇಲೆ ನೆಗೆಯುವ ಸಾಮಥ್ರ್ಯಕ್ಕೆ ಹೆಸರುವಾಸಿಯಾಗಿದೆ, ಉಷ್ಣವಲಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಜಂಪಿಂಗ್ ಜೇಡಗಳು ಕೆಲವು ಮಾತ್ರ ಉತ್ತರ ಮತ್ತು ಆಕ್ರ್ಟಿಕ್ ಪ್ರದೇಶಗಳಲ್ಲಿಯೂ ಸಹ ವಾಸಿಸುತ್ತವೆ. ಸುಮಾರು 2 ರಿಂದ 22 ಮಿ.ಮೀ (0.08 ರಿಂದ 0.87 ಇಂಚು) ಗ್ರಾತವನ್ನು ಹೊಂದಿದ್ದು ನಾಲ್ಕು ಜೋಡಿ ಕಣ್ಣುಗಳಿಂದ ವಿಶೇಷವಾಗಿದೆ.
ಈ ಹೊಸ ಪ್ರಬೇಧ ಪತ್ತೆಯಾದ ಗರ್ವಾಲೆ ಗ್ರಾಮವು ಕೃಷಿ ಅರಣ್ಯಗಳಿಂದ ಆವೃತ್ತವಾಗಿದ್ದು, ಕಾಳು ಮೆಣಸು ಮತ್ತು ಭತ್ತದ ಗದ್ದೆಗಳೊಂದಿಗೆ ಕಾಫಿ ತೋಟಗಳು ಪ್ರಮುಖವಾಗಿರುವ ಈ ಗ್ರಾಮವು ತನ್ನ ಮಾರ್ಗದಲ್ಲಿ ಸುಂದರ ಜಲಪಾತಗಳನ್ನೊಳಗೊಂಡು ಆಕರ್ಷಿತ ಸ್ಥಳವು ಆಗಿದೆ.