ಭಾರತೀಯ ಹಡಗು INS ತಬರ್ ಜೂನ್ 27, 2024 ರಿಂದ ಜೂನ್ 30 ರವರೆಗೆ ಈಜಿಪ್ಟ್ ನ ಅಲೆಕ್ಸಾಂಡಿಯ ನಗರದ ಬಂದರಿಗೆ ಸೌಹಾರ್ದ ಭೇಟಿ ನೀಡಿದೆ, ಈ ಭೇಟಿಯು ಭಾರತದ ತಂತ್ರಾತ್ಮಕದ ಜೊತೆ ಸಾಗರ ತೊಡಗಿಸಿಕೊಳ್ಳುವಿಕೆಯನ್ನು ಒತ್ತಿಹೇಳುತ್ತಾ ಪ್ರಾದೇಶಿಕ ಮತ್ತು ಸಹಕಾರ ನೌಕಾದಳದ ಸಾಮರ್ಥ್ಯವನ್ನು ಕೂಡ ಒತ್ತಿ ಹೇಳುತ್ತದೆ.ಇದು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಭಾರತದ ಬದ್ಧತೆಯನ್ನು ಎತ್ತಿ ತೋರುತ್ತದೆ.
INS ತಬರ್ ಮೇ 25, 2001 ರಿಂದ ತನ್ನ ಕೆಲಸವನ್ನು ಪ್ರಾರಂಭಿಸಿದ್ದರು ಕೂಡ 3 ವರ್ಷಗಳ ನಂತರ ಭಾರತ ಸರ್ಕಾರವು ಕಡಲ್ಗಳ್ಳತನ ವಿರೋಧಿ ಕಣ್ಗಾವಲು ನಡೆಸಲು INS ತಬರ್ ನ್ನು ಏಪ್ರಿಲ್ 19, 2004 ರಂದು ರಷ್ಯಾದಲ್ಲಿ ಯುದ್ಧ ನೌಕೆಯನ್ನಾಗಿ ಸೇವೆಗೆ ನಿಯೋಜಿಸಿತು. ತಲ್ವಾರ್ ವರ್ಗದ ಪ್ರಿಗೆಟ್ ಹೊಂದಿದ್ದು, ವಾಯು ವಿರೋಧಿ ಕ್ಷಿಪಣಿಗಳನ್ನು ಒಳಗೊಂಡಿದ್ದು, ಜಲಾಂತರ್ಗಾಮಿ ವಿರೋಧಿ ಯುದ್ಧ ತಾಂತ್ರಾಂಶವನ್ನು ಹೊಂದಿರುತ್ತದೆ
ಇದನ್ನು “ಯುದ್ಧದ ಕೊಡಲಿ” ಎಂದು ನಾಮಕರಣ ಮಾಡಲಾಗಿದ್ದು, ಇದರ ತವರು ಬಂದರು ಮುಂಬೈಯಾಗಿರುತ್ತದೆ. ಇದರ ಸಹೋದರಿ ಹಡಗುಗಳು INS ತಲ್ವಾರ್ ಮತ್ತು INS ತ್ರಿಶೂಲ್ ಗಳಾಗಿರುತ್ತವೆ. ಧೈರ್ಯ ಮತ್ತು ವೈಭವ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ
ಇದೊಂದು ಸುಸಜ್ಜಿತ ನೌಕೆಯಾಗಿದ್ದು, ವಾಯುಮೇಲಿನ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಾಗರಕಾರ್ಯಚರಣೆಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ನೌಕಾ ಕಾರ್ಯಪಡೆಯನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.ಹಲವಾರು ಕಾರ್ಯಾಚರಣೆಗಳಿಗೆ ವಿವಿಧ ಬಂದರುಗಳಿಗೆ ಭೇಟಿ ನೀಡಲು ಯಶಸ್ವಿಯಾಗಿದ್ದು, ವಿಶಾಖಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಲೀಟ್ ರಿಮ್ಯೂ ನಲ್ಲಿ ಭಾಗವಹಿಸಿದೆ. ಪ್ರಸ್ತುತ ಹಡಗನ್ನು ಕ್ಯಾಪ್ಟನ್ M.R. ಹರೀಶ್ ರವರು ಮುನ್ನಡೆಸುತ್ತಿದ್ದು ಇವರು ಈಜಿಪ್ಟ್ ನೌಕಾಪಡೆಯೊಂದಿಗೆ ಪ್ಯಾಸೆಜ್ ವ್ಯಾಯಾಮದಲ್ಲಿ ಭಾಗವಹಿಸುತ್ತಾರೆ.