ದೇಶದಲ್ಲಿ ಲೋಕಸಭಾ ಚುನಾವಣೆಗಳ ಕಾವು ಏರಿದೆ. ಯಾರು ಗದ್ದುಗೆಗೆ ಏರಲಿದ್ದಾರೆ ಎಂಬ ಪೈಪೋಟಿ ಸಹ ನಡೆಯುತ್ತಿದೆ. ಈ ಬೆನ್ನಲ್ಲೆ ದೇಶದ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಯನ್ನು ಯಾರು ಪಡೆಯಬಹುದು ಎಂದು ಒಂದು ಚರ್ಚೆ ಇತ್ತಿಚಿಗೆ ನಡೆಯುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಈ ರೇಸ್‌ನಲ್ಲಿ ರಿಲಯನ್ಸ್ ಕಂಪನಿಯ ಮಾಲಿಕ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ನಡುವೆ ಬಿರುಸಿನ ಪೈಪೋಟಿ ನಡೆದಿತ್ತು.
ಈಗ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈಗ ರಿಲಯನ್ಸ್. ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಅವರನ್ನು ಬಿಟ್ಟು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಇವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ.
ಬ್ಲೂಮ್‌ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ಉದ್ಯಮಿ ಗೌತಮ್ ಅದಾನಿ ಅವರು, ರಿಲಯನ್ಸ್ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.
ಮುಂದಿನ ಹತ್ತು ವರ್ಷಗಳಲ್ಲಿ ಅದಾನಿ ಸಮೂಹವು ಉದ್ಯಮದ ವಿಸ್ತರಣೆಗಾಗಿ ₹7.51 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಮೆರಿಕದ ಟ್ರೋಕರೇಜ್ ಸಂಸ್ಥೆಯಾದ ಜೆಫರಿಸ್ ಹೇಳಿತ್ತು. ಹಾಗಾಗಿ, ಶುಕ್ರವಾರದ ಷೇರು ವಹಿವಾಟಿನಲ್ಲಿ ಅದಾನಿ ಒಡೆತನದ ಹತ್ತು ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕೆ ₹84,064 ಕೋಟಿ ಸೇರ್ಪಡೆಯಾಗಿತ್ತು. ಒಟ್ಟು ಎಂ-ಕ್ಯಾಪ್ ₹17.51 ಲಕ್ಷ ಕೋಟಿ ಆಗಿದೆ.
ಅದಾನಿ ಸಮೂಹವು ಅತೀ ಹೆಚ್ಚು ಹೂಡಿಕೆ ಮಾಡುವ ಸಂಸ್ಥೆಯಾಗಿ ಖ್ಯಾತಿಯನ್ನು ಗಳಿಸಲಿದೆ.ಭಾರತವನ್ನು ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಸೇರಿಸಿದ ಭಾರತೀಯರ ಕೊಡುಗೆ ಅಪಾರವಾದದ್ದು.