ಜಪಾನಿಯರ ಯಶಸ್ಸಿಗೆ ಬರೀ ಅವರ ಸಮಯ ಪ್ರಜ್ಞೆ ಮತ್ತು ಅವರ ಪರಿಶ್ರಮ ಮಾತ್ರ ಕಾರಣವಲ್ಲ. ಇವುಗಳನ್ನು ಹೊರತುಪಡಿಸಿ ಅವರಲ್ಲಿನ ಬಹು ಮುಖ್ಯವಾದ ಒಂದು ಹವ್ಯಾಸ ನಾವು ತಿಳಿಯಬೇಕಾಗಿದೆ. ಅದುವೇ “ಕೈಜೆನ್” ಅಂದರೆ ‘ನಿರಂತರ ಬೆಳವಣಿಗೆ’. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಅದು ಒಂದು ಅಥವಾ ಹಲವು ದಿನಗಳ ಪ್ರಯತ್ನದಿಂದ ದೊರೆಯುವುದಿಲ್ಲ. ಅದಕ್ಕಾಗಿ ನಿರಂತರ ಶ್ರಮ ಮತ್ತು ಬೆಳವಣಿಗೆ ಬೇಕಾಗಿರುತ್ತೆ. ಯಾವುದೇ ವಿಷಯದಲ್ಲಿ ನಾವು ಮೇಲುಗೈ ಸಾಧಿಸಬೇಕಾದರೆ ಆ ವಿಷಯದ ಬಗ್ಗೆ ನಿರಂತರವಾಗಿ ಸ್ವಲ್ಪ ಮಟ್ಟಿನ […]